    ಮೂಲದೊಡನೆ ಪರಿಶೀಲಿಸಿ

ಓಜೋ಼ನ್: ದ್ವಿಪರಮಾಣಿಕ (ಡೈಅಟಾಮಿಕ್) ಆಕ್ಸಿಜನ್ ಅಣುವಿಗೆ ಶಕ್ತಿಯನ್ನು ಸೇರಿಸಿದಾಗ ದೊರೆಯುವ ಆಕ್ಸಿಜನ್ನಿನ ಅಪರರೂಪ (ಅಲ್ಲಾಟ್ರಾಪಿಕ್ ಫಾರ್ಮ್) ತ್ರಿಪರಮಾಣಿಕ ಅಣು, o3. ಈ ಕ್ರಿಯೆಯನ್ನು ಸೂಚಿಸುವ ಸಮೀಕರಣ
3o2 + 68 ಏ ಛಿಚಿಟ.ಲ 2o3
                                     (g)		    (g) 
ಆಕ್ಸಿಜನ್ನಿನ ಅಪರರೂಪಗಳ ಗುಣಗಳನ್ನು ಮುಂದೆ ಬರೆದಿರುವ ಪಟ್ಟಿ ತೋರಿಸುತ್ತದೆ.
	ಗುಣ	o2	o3
ಅಣುಭಾರ (ಮಾಲೆಕ್ಯುಲರ್ ವೇಟ್), ಚಿmu	...	32.00	...	47.998
ಬಂಧದೂರ, Å	...	1.20	...	1.260
ಮಾನಕ ಕರಗುವ ಬಿಂದು (ನಾರ್ಮಲ್	...	 54.30	...	23.600
   ಮೆಲ್ಟಿಂಗ್ ಪಾಯಿಂಟ್), oಏ
ಮಾನಕ ಕುದಿಯುವ ಬಿಂದು oಏ	...	90.20	...	161.700	ಅವಧಿಕ (ಕ್ರಿಟಿಕಲ್) ಉಷ್ಣತೆ, oಏ	...	154.00	...	268.000	ದ್ರವಸಾಂದ್ರತೆ ( 90oಏ ) ಗ್ರಾಂ/ಮಿ.ಲೀ.	...	1.14	...	1.710
ಅತಿಯಾದ ವೋಲ್ಟೇಜಿನ ವಿದ್ಯುತ್ ಯಂತ್ರಗಳ ಬಳಿ ಒಂದು ವಿಧವಾದ ಮೀನಿನ ವಾಸನೆಯುಳ್ಳ ಒಂದು ಅನಿಲದ ಉತ್ಪತ್ತಿಯನ್ನು ಕೆಲವು ವಿಜ್ಞಾನಿಗಳು ಅರಿತಿದ್ದರು. ಷೊನ್ಬೆನ್ ಎಂಬಾತ ಇದಕ್ಕೆ ಗ್ರೀಕ್ ಭಾಷೆಯ ಓಜೋ಼ನ್ (ಎಂದರೆ ವಾಸನಾಯುತ) ಎಂದು ನಾಮಕರಣ ಮಾಡಿದ. ಈ ಅನಿಲ ಸಮುದ್ರತೀರದ ಗಾಳಿಯಲ್ಲಿ ಹೆಚ್ಚಾಗಿ ಇರುತ್ತದೆ. ಅತಿನೇರಳೆ ಕಿರಣಗಳು ಮತ್ತು ಮಿಂಚು ಸಿಡಿಲುಗಳಿಂದ ಇದು ಗಾಳಿಯಲ್ಲಿ ಉತ್ಪತ್ತಿಯಾಗುತ್ತದೆ. ಗಾಳಿಯಲ್ಲಿ ರಂಜಕದ ಸಾವಕಾಶದ ಉತ್ಕರ್ಷಣದಿಂದಲೂ ಇದು ತಯಾರಾಗುತ್ತದೆ. ಬ್ರಾಡಿ ಅಥವಾ ಸೀಮನ್ಸ್‌ ಓಜೋ಼ನೈಸರ್ ಎಂಬ ಉಪಕರಣಗಳನ್ನು ಉಪಯೋಗಿಸಿ ಇದನ್ನು ತಯಾರಿಸಬಹುದು. ನಿಶ್ಯಬ್ದ ವಿದ್ಯುತ್ ವಿಸರ್ಜನೆಯನ್ನು (ಡಿಸ್ಚಾರ್ಜ್) ಶುದ್ಧವಾದ ಗಾಳಿ ಅಥವಾ ಆಕ್ಸಿಜನ್ನುಗಳ ಮೂಲಕ ಹಾಯಿಸುವುದರಿಂದ ಓಜೋ಼ನ್ ಉತ್ಪತ್ತಿಯಾಗುತ್ತದೆ. ಸೀಮನ್ಸನ ಉಪಕರಣದಲ್ಲಿ ಎರಡು ಏಕಕೇಂದ್ರೀಯ ಕೊಳವೆಗಳಿವೆ. ಹೊರಕೊಳವೆಯ ಹೊರಮೈಯನ್ನೂ ಒಳಕೊಳವೆಯ ಒಳಮೈಯನ್ನೂ ತವರದ ತೆಳುವಾದ ತಗಡಿನಿಂದ ಮುಚ್ಚಲಾಗಿದೆ. ಈ ಲೋಹಗಳನ್ನು ಹೆಚ್ಚು ವೋಲ್ಟೇಜಿನ ಪ್ರೇರಕ ಸುರುಳಿಗಳಿಗೆ (ಇಂಡಕ್ಷನ್ ಕಾಯಿಲ್) ಜೋಡಿಸಿದೆ. ವಿದ್ಯುತ್ ಸಂಬಂಧವನ್ನು ಕಲ್ಪಿಸಿ ಎರಡು ಕೊಳವೆಗಳ ಮಧ್ಯೆ ಶುದ್ಧವಾದ ಗಾಳಿ ಅಥವಾ ಆಕ್ಸಿಜನ್ನನ್ನು ಹಾಯಿಸಿದಾಗ ಸ್ವಲ್ಪ ಪ್ರಮಾಣದಲ್ಲಿ ಓಜೋ಼ನ್ ಬರುತ್ತದೆ.
ಬ್ರಾಡಿ ಓಜೋ಼ನೈಸರಿನಲ್ಲಿ ತವರದ ಬದಲು ಸಲ್ಫ್ಯೂರಿಕ್ ಆಮ್ಲವಿದೆ. ವಿದ್ಯುಚ್ಛಕ್ತಿ ಅಥವಾ 209 m್ಸ, ಅತಿನೇರಳೆ ತರಂಗಗಳಲ್ಲಡಗಿರುವ ಶಕ್ತಿಯನ್ನು ಹೀರಿದಾಗ ಆಕ್ಸಿಜನ್ನಿನ ಅಣುಗಳು ಪರಮಾಣುಗಳಾಗಿ ಅನಂತರ ಓಜೋ಼ನ್ ಅಣುಗಳಾಗುತ್ತವೆ. 
		o2ಲ o + o
		o + o + oಲ o3
1.1	ಸಾಂದ್ರತೆಯ ಸಲ್ಫ್ಯೂರಿಕ್ ಆಮ್ಲದ ಒಂದ ವಿಶೇಷ ರೀತಿಯ ವಿದ್ಯುದ್ವಿಭಜನೆಯಿಂದಲೂ ಈ ಅನಿಲವನ್ನು ಪಡೆಯಬಹುದು.
ಓಜೋ಼ನ್ ಉತ್ಪತ್ತಿಯಾಗುವಾಗ ಶಕ್ತಿಯನ್ನು ಹೀರುವುದರಿಂದ (ಎಂಡೋಥರ್ಮಿಕ್) ಇದಕ್ಕೆ ಸ್ಫೋಟಕ ಗುಣ ಉಂಟು. ಇದನ್ನು ಕಾಯಿಸಿದಾಗ (3000 ಸಂ.) ಪುರ್ಣವಿಭಜನೆಗೊಂಡು ಆಕ್ಸಿಜನ್ನನ್ನು ಕೊಡುತ್ತದೆ. ಗಾಜು, ಪ್ಲಾಟಿನಂ, ಬೆಳ್ಳಿ, ಮ್ಯಾಂಗನೀಸ್ ಡೈಆಕ್ಸೈಡ್ ಮುಂತಾದ ಪುಡಿಗಳು ವೇಗವರ್ಧಕಗಳಾಗಿ ಇದನ್ನು ವಿಭಜಿಸಿ ಆಕ್ಸಿಜನ್ನನ್ನು ಕೊಡುತ್ತವೆ. ಈ ಗುಣಗಳಲ್ಲಿ ಇದು ಹೈಡ್ರೊಜನ್ ಪೆರಾಕ್ಸೈಡನ್ನು ಹೋಲುತ್ತದೆ. ಶುದ್ಧ ಓಜೋ಼ನ್ ಸ್ಫೋಟಕವಸ್ತುವಾದ್ದರಿಂದ ಇದನ್ನು ಯಾವಾಗಲೂ ಆಕ್ಸಿಜನ್ ಮಿಶ್ರಣದೊಂದಿಗೆ ತಯಾರಿಸುತ್ತಾರೆ. ಇದನ್ನು ತಣ್ಣಗೆ ಮಾಡಿದಾಗ ಆಕ್ಸಿಜನ್ ದ್ರವವಾಗಿ ಅದರಲ್ಲಿ ಓಜೋ಼ನ್ ಕರಗಿ ನೀಲಿ ಬಣ್ಣದ ದ್ರಾವಣವಾಗುತ್ತದೆ. ಇನ್ನೂ ತಣ್ಣಗೆ ಮಾಡಿದಾಗ ಓಜೋ಼ನ್ ಕರಿಯ ಹರಳುಗಳಾಗಿ ಬೇರ್ಪಡುತ್ತದೆ. ಇದು ನೀರಿನಲ್ಲಿ ಆಕ್ಸಿಜನ್ನಿಗಿಂತಲೂ ಹೆಚ್ಚು ಕರಗುತ್ತದೆ. ಟರ್ಪೆಂಟೈನ್ ಮತ್ತು ಇತರ ಸುಗಂಧ ತೈಲಗಳಲ್ಲಿ (ಎಸೆನ್ಯಿಯಲ್ ಆಯಿಲ್ಸ್‌) ದ್ರಾವಣವಾಗುತ್ತದೆ. ಪಾದರಸವನ್ನು ಗಾಜಿಗೆ ಅಂಟುವಂತೆ ಮಾಡುವುದು ಇದರ ವಿಶೇಷ ಗುಣ. ನೀರಿನ ಇರವಿನಲ್ಲಿ ಈ ಮೇಲಿನ ಗುಣ ಇರುವುದಿಲ್ಲ. 1,20,000ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಇದು ಗಾಳಿಯಲ್ಲಿದ್ದರೆ ಆಗ ಗಂಟಲು ಮೂಗು ಉರಿಯುವ ಒಂದು ವಿಧವಾದ ವಾಸನೆಯ ಅನುಭವ ಆಗುವುದು. ಈ ಪ್ರಮಾಣದಲ್ಲಿ ಇದು ವಿಷ. ಇದು ಒಳ್ಳೆಯ ಉತ್ಕರ್ಷಣಕಾರಿ. ಪೊಟಾಸಿಯಂ ಅಯೊಡೈಡಿನಿಂದ ಅಯೊಡೀನನ್ನು ಬೇರ್ಪಡಿಸುತ್ತದೆ. ಗಂಧಕ, ರಂಜಕಗಳನ್ನು ಉತ್ಕೃಷ್ಟ ಆಮ್ಲಗಳಾಗಿ ಪರಿವರ್ತಿಸುತ್ತದೆ. ಸಸ್ಯಮೂಲವಾದ ಬಣ್ಣಗಳನ್ನು ಬಿಳಿಚುಮಾಡುತ್ತದೆ. ಇದು ರಬ್ಬರಿನಂಥ ಅಪರ್ಯಾಪ್ತ ಸಾವಯವ ರಸಾಯನ ಪದಾರ್ಥಗಳೊಡನೆ ಬೆರೆತು ಓಜೋ಼ನೈಡುಗಳೆಂಬ ಸಂಯುಕ್ತಗಳಾಗುತ್ತದೆ.

ಓಜೋ಼ನಿನ ಅಣುಭಾರ ಮತ್ತು ರಚನೆಗಳನ್ನು ಸೊರೆಟ್, ನ್ಯೂತ್ ಮತ್ತಿತರರು ಇದರ ವಿಭಜನೆಯಿಂದಲೂ ಮತ್ತು ವಿಸರಣ (ಡಿಫ್ಯೂಶನ್) ಶಕ್ತಿಯಿಂದಲೂ ಕಂಡು ಹಿಡಿದಿದ್ದಾರೆ. 20 ಸಿ.ಸಿ. ಓಜೋ಼ನ್ ವಿಭಜಿಸಿದಾಗ 30 ಸಿ.ಸಿ. ಆಕ್ಸಿಜನ್ನನ್ನು ಕೊಡುತ್ತದೆ. ಇದರ ವಿಸರಣಶಕ್ತಿ ಆಕ್ಸಿಜನ್ನಿಗಿಂತಲೂ ಕಡಿಮೆ. ಈ ಗುಣಗಳಿಂದ ಇದರ ಅಣು o3 ಎಂದು ನಿರ್ಧರಿಸಲಾಗಿದೆ. ಇದರ ಅವಶೋಷಣರೋಹಿತದ (ಅಬ್ಸಾರ್ಪ್ಷನ್ ಸ್ಪೆಕ್ಟ್ರಂ) ತರಂಗಮಾನದ ಪ್ರಕಾರ ಇದರ ಅಣುರಚನೆ ಹೀಗಿದೆ.

ಈ ಅಣು ತ್ರಿಕೋನಾಕೃತಿಯಲ್ಲಿದೆ. ಇದರ ಕೋನ ಸುಮಾರು 1170. ದೊಡ್ಡ ಪ್ರದರ್ಶನಶಾಲೆಗಳಲ್ಲಿಯೂ ನೆಲದಡಿಯ ರೈಲ್ವೆ ಸಂಚಾರದಲ್ಲಿಯೂ ಗಾಳಿಯ ಶುದ್ಧೀಕರಣಕ್ಕೆ ಓಜೋ಼ನನ್ನು ಉಪಯೋಗಿಸುತ್ತಾರೆ. ಆಹಾರವಸ್ತುಗಳಲ್ಲಿ ಬಳಸುವ ವ್ಯಾನಿಲ ಎಂಬ ವಸ್ತುವಿನ ತಯಾರಿಕೆಯಲ್ಲಿಯೂ ಇದನ್ನು ಬಳಸಬಹುದು.          				       (ಬಿ.ಎಸ್.ಯು.)

ಭೂಮಟ್ಟದಿಂದ ಸರಾಸರಿ 4 ಕಿಮೀಗಳ ವರೆಗೆ ವಾಯುಮಂಡಲ ಕ್ರಮೇಣ ವಿರಳವಾಗುತ್ತ ವ್ಯಾಪಿಸಿದೆ. ಅಲ್ಲಿಂದ ಮೇಲೆ ವಾಯುಕಣಗಳು ತೀರ ವಿರಳವಾಗುತ್ತ ಹೋಗಿ 17-49 ಕಿಮೀಗಳ ವಲಯದಲ್ಲಿ ಒಂದು ಓಜೋ಼ನ್ ಗೋಳ ಏರ್ಪಡುವುದು. ವಾಯುಮಂಡಲದ ಆಕ್ಸಿಜನ್ನಿಗೂ (o2) ಸೂರ್ಯನಿಂದ ಪ್ರವಹಿಸುವ ಅತಿನೇರಳೆ ಕಿರಣಗಳಿಗೂ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ ಈ ಗೋಳ. ಓಜೋ಼ನಿನ ಗರಿಷ್ಠ ಸಾಂದ್ರತೆ ಇರುವುದು 15 ಮೈಲಿಗಳ ಎತ್ತರದಲ್ಲಿ. ಓಜೋ಼ನ್ ಗೋಳದ ಇರವನ್ನು ಮೊದಲು ಕಂಡುಹಿಡಿದವ ಫ್ರಾನ್ಸಿನ ಭೌತವಿಜ್ಞಾನಿ ಚಾಲ್ರ್ಸ್‌ ಫಾಬ್ರಿ (1913). ಈ ಗೋಳದ ಭದ್ರ ಕವಚ ಸೌರವಿಸರಣೆಯನ್ನು ತಡೆದು ಸೋಸಿ ಬೆಳಕು ಉಷ್ಣ ಮುಂತಾದ ತರಂಗಗಳನ್ನು ಮಾತ್ರ ಒಳಗೆ ಬಿಡುವುದು. ಎಂದರೆ, ಈ ಗೋಳ ಅತಿನೇರಳೆ ತರಂಗಗಳಿಗೆ ಅಪಾರದರ್ಶಕ, ಓಜೋ಼ನ್ ಗೋಳದಿಂದ ಮೇಲೆ ಇರುವ ಅಯಾನ್ ಗೋಳದಲ್ಲಿ ಗಾಳಿಯ ಅಣುಗಳು ಅಯಾನೀಕೃತ ಸ್ಥಿತಿಯಲ್ಲಿರುವುವು. ಈ ಪರಿಸ್ಥಿತಿ 49 ಕಿಮೀಗಳಿಗಿಂತಲೂ ಎತ್ತರದಲ್ಲಿ. ಅಯಾನ್ ಮತ್ತು ಓಜೋ಼ನ್ ಗೋಳಗಳು ಒಟ್ಟಾಗಿ ಭೂಮಿಗೆ ತೊಡಿಸಿರುವ ಭದ್ರಕವಚದಂತಿದೆ. ಜೀವಿಗಳಿಗೆ ಅತ್ಯಪಾಯಕಾರಿಗಳಾದ ಅತಿನೇರಳೆ ತರಂಗಗಳನ್ನು ಈ ಕವಚ ತಡೆಹಿಡಿದು. ನೀಡುವ ರಕ್ಷಣೆಗೆ ನಾವು ತೆರಬೇಕಾದ ದಂಡ ಆಕಾಶದ ಹಲವಾರು ವಿದ್ಯಮಾನಗಳನ್ನು ಕುರಿತ ನಮ್ಮ ಕುರುಡುತನ. ಈ ಕವಚ ವಿಶ್ವದ ಹಲವಾರು ಭಾಗಗಳನ್ನು ನಮ್ಮಿಂದ ಮುಚ್ಚಿಟ್ಟಿರುವ ಬಾಗಿಲು, ಇದರ ದೆಸೆಯಿಂದ ಸೂರ್ಯನಿಂದ ಅದರಂತೆಯೇ ಇತರ ಆಕಾಶಕಾಯಗಳಿಂದ ಭೂಮಿಗೆ ವಿಸರಿತವಾಗುವ ಅತಿನೇರಳೆ ತರಂಗಗಳು ನೆಲವನ್ನು ತಲುಪುವುದೇ ಇಲ್ಲ (ನೋಡಿ- ಎಕ್ಸ್‌ಕಿರಣ-ಖಗೋಳಶಾಸ್ತ್ರ).	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ